ವೇಮಗಲ್ ಪಟ್ಟಣ ಪಂಚಾಯತಿಯ ಸುಳದೇನಹಳ್ಳಿ ವಾರ್ಡ್ ಸದಸ್ಯ ಸಿಎಸ್ ವೆಂಕಟೇಶ್ ನನ್ನ ಮೇಲೆ ಮಾಡಿರುವ ಆರೋಪಗಳು ಸುಳ್ಳು ಎಂದು ಈಶ್ವರ ದೇವಾಲಯದಲ್ಲಿ ಕರ್ಪುರ ಉಹಚ್ಚಿ ಪ್ರಮಾಣ ಮಾಡಿದ್ದೇನೆ, ಆದರೆ ನನ್ನ ಚಾಲೆಂಜ್ ಸ್ವೀಕರಿಸದೇ ಸಿಎಸ್ ವೆಂಕಟೇಶ್ ಪರಾರಿಯಾಗಿದ್ದಾರೆ ಎಂದು ಸುಳ್ಳದೇನಹಳ್ಳಿ ಗ್ರಾಮದ ಮುಖಂಡ ಸಕಲೇಶ್ ಸಿಎಸ್ ವೆಂಕಟೇಶ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸುಳದೇನಹಳ್ಳಿ ಗ್ರಾಮದ ಈಶ್ವರ ದೇವಾಲಯದಲ್ಲಿ ಬುಧವಾರ ದೇವರ ಮುಂದೆ ಕರ್ಪೂರ ಹಚ್ಚಿ ಹಣೆಪ್ರಮಾಣ ಮಾಡಿ ಮಾತನಾಡಿದ ಸಕಲೇಶ್ ಅವರು ಸಿಎಸ್ ವೆಂಕಟೇಶ್ ನಮ್ಮ ಊರಿಗೆ ಬಂದು ನನ್ನ ಮೇಲೆ ಮೂರು ಆರೋಪ ಮಾಡಿ ಹೋಗಿದ್ದಾರೆ, ನಾನೇ ಅವರಿಗೆ ಚಾಲೆಂಜ್ ಹಾಕಿದ್ದೆ ದೇವಾಲಯಕ್ಕೆ ಬಂದು ಅಣೆ ಪ್ರಮಾಣ ಮಾಡು ನಾನು ಮಾಡುತ್ತೇನೆ ಎಂದು ಆದ್ರೆ ಮಾಡಲಿಲ್ಲ ಎಂದ್ರು.