ರಾತ್ರಿ ಸುರಿದ ಭಾರಿ ಮಳೆಗೆ ಕೋಲಾರ ನಗರದ ಹೃದಯಭಾಗದಲ್ಲಿರುವ ಕುವೆಂಪು ಪಾರ್ಕ್ ಕೆರೆಯಂತಾಗಿದ್ದು ಹಾವುಗಳು ಸೇರಿದಂತೆ ವಿಷಪೂರಿತ ಜಂತುಗಳ ವಾಸಸ್ಥಾನವಾಗಿ ಮಾರ್ಪಟ್ಟಿದೆ. ಅಂತರಗಂಗೆ ಬೆಟ್ಟ ರಸ್ತೆಯಲ್ಲಿನ ಪ್ರಮುಖ ಉದ್ಯಾನವನ ಆಗಿರುವ ಕುವೆಂಪು ಪಾರ್ಕ್ ದೊಡ್ಡ ದೊಡ್ಡ ಮರಗಳಿಂದ ಕಂಗೊಳಿಸುತ್ತ ಹಸಿರುಮಯವಾಗಿದೆ. ಅದರೆ ಮಳೆ ಬಂದ್ರೆ ಸಾಕು ನೀರು ನಿಂತು ದೊಡ್ಡ ಕೆರೆಯಾಗುತ್ತದೆ.ಪಾರ್ಕ್ ಸುತ್ತಮುತ್ತಲೂ ಶಾಲೆ ಕಾಲೇಜ್, ಆಸ್ಪತ್ರೆಗಳು ಇದ್ದು ವಿಧ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪಾರ್ಕ್ ನಲ್ಲಿ ವಿಶ್ರಾಂತಿ ಪಡೆಯಲು ಅಗಮಿಸುತ್ತಾರೆ. ಬೆಳ್ಳಗೆ ಮತ್ತು ಸಂಜೆ ಸ್ಥಳೀಯ ನಿವಾಸಿಗಳು ಪಾರ್ಕ್ ನಲ್ಲಿ ವಾಕಿಂಗ್ ಮಾಡುತ್ತಾರೆ ಎಂದ್ರು