ಮೈಸೂರು: ಜಗತ್ಪ್ರಸಿದ್ಧ ಮೈಸೂರು ಅರಮನೆಗೆ ಬಣ್ಣ ಬಳಿಯುವ ಕಾರ್ಯ ಪ್ರಗತಿಯಲ್ಲಿ. ನುರಿತ ಕೆಲಸಗಾರರು ಅರಮನೆಗೆ ಬಣ್ಣ ಹೊಡೆಯುವ ಕಾರ್ಯದಲ್ಲಿ ಬ್ಯುಸಿ. ದಸರಾ ಮಹೋತ್ಸವದ ಸಂದರ್ಭದಲ್ಲಿ ಅರಮನೆಯ ಅಂದವನ್ನು ಮತ್ತಷ್ಟು ಹೆಚ್ಚಿಸಲು ಕ್ರಮ. ಅರಮನೆಯ ಹೊರ ಆವರಣದಲ್ಲೂ ಬಣ್ಣ ಬಳಿಯುವ ಕಾರ್ಯಕ್ಕೆ ಚಾಲನೆ. ಇದೇ ವೇಳೆ ನಿಷ್ಕ್ರಿಯ ಆಗಿರುವ ವಿದ್ಯುತ್ ದೀಪಗಳನ್ನು ಬದಲಿಸುವ ಕಾರ್ಯ ಮತ್ತಷ್ಟು ಚುರುಕು. ಬರ್ನ್ ಆಗಿರುವ ಬಲ್ಪ್ ಗಳನ್ನು ತೆಗೆದು ಹೊಸ ಬಲ್ಪ್ ಗಳ ಅಳವಡಿಕೆ. ವಿದ್ಯುತ್ ದೀಪಗಳ ಬೆಳಕಿನಲ್ಲಿ ಮತ್ತಷ್ಟು ಜಗಮಗಿಸಲಿರುವ ಜಗದ್ವಿಖ್ಯಾತ ಐತಿಹಾಸಿಕ ಅರಮನೆ.