ಆಪರೇಷನ್ ಸಿಂಧೂರ ಯಶಸ್ಸಿಗೆ ಕಾರಣರಾದ ಸೈನಿಕರಿಗೆ, ಹಾಗೂ ಪ್ರಧಾನ ಮಂತ್ರಿ ನರೇಂದ್ರಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಲು ಆ. 30 ರಂದು ತುಮಕೂರಿನಲ್ಲಿ ಆಪರೇಷನ್ ಸಿಂಧೂರ ವಿಜಯೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಶಾಸಕ ಸುರೇಶ್ ಗೌಡ ಹೇಳಿದರು.ಅವರು ತುಮಕೂರು ನಗರದ ಜೂನಿಯರ್ ಕಾಲೇಜು ಮೈದಾನದಲ್ಲಿ ನಡೆಯಲಿರುವ ಆಪರೇಷನ್ ಸಿಂಧೂರ ವಿಜಯೋತ್ಸವ ವೇದಿಕೆ ಮುಂಭಾಗ ಗುರುವಾರ ಮಧ್ಯಾಹ್ನ 12.20 ರ ಸಮಯದಲ್ಲಿ ಮಾತನಾಡಿದರು.ಪಾಪಿ ಪಾಕಿಸ್ತಾನದ ಭಯೋತ್ಪದಕರು ಕಲ್ಮವನ್ನ ಹೇಳದ ಪ್ರವಾಸಿಗರಿಗೆ ಧರ್ಮವನ್ನ ಕೇಳಿ ಹತ್ಯೆ ಮಾಡಿದ್ದರು ಹಾಗೆಯೇ ನರೇಂದ್ರ ಮೋದಿ ಗೆ ಹೇಳಿ ಎಂದಿದ್ದರು ಎಂದರು.