2019 ರ ಮಲೆನಾಡಿನ ಮಳೆಯ ಆರ್ಭಟ ಈಗಲೂ ರಾತ್ರಿ ಕನಸಲ್ಲೂ ಮಲೆನಾಡಿನ ಜನರು ಬೆಚ್ಚಿ ಬೀಳುವಂತೆ ಮಾಡಿದೆ. ಪ್ರವಾಹ ವಿನಾಶ ಸಂಭವಿಸಿ 6 ವರ್ಷ ಕಳೆದರೂ ಮನೆ, ತೋಟ, ಜಮೀನು ಕಳೆದುಕೊಂಡ ನಿರಾರ್ಶಿತರಿಗೆ ಮಾತ್ರ ಇನ್ನು ಶಾಸ್ವತ ಪರಿಹಾರ ಸಿಕ್ಕಿಲ್ಲ...ಆದ್ರೆ ಇದೇ ವೇಳೆ ರಾಜ್ಯ ಸರ್ಕಾರ ಕೇರಳದ ವಯನಾಡು ನಿರಾರ್ಶಿತರಿಗೆ 10 ಕೋಟಿ ಹಣ ನೀಡಿರುವುದು ಮಲೆನಾಡಿಗರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. 2019ರಲ್ಲಿ ಮನೆ,ತೋಟ ಸರ್ವಸ್ವವನ್ನು ಕಳೆದುಕೊಂಡು ಬೀದಿಪಾಲದವರಿಗೆ ಕನಿಷ್ಠ ಪರಿಹಾರ, ಸೂರು ನೀಡದಿರೋದು ನಾಚಿಗೆಗೇಡು ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿಕಾರುತ್ತಿದ್ದಾರೆ. ಪ್ರವಾಹದ ಸಂದರ್ಭದಲ್ಲಿ ತಾಲೂಕಿ ಮಲೆಮನೆ, ಹಿರೇಬೈಲು ಸೇರಿದಂತೆ ಹಲವು ಗ್ರಾಮಗಳು ನಾಮಾವಾಶೇಷ ಆಗಿದ್ದವು.ಮನೆ ಕಳೆದುಕೊಂಡೋರು ಇಂದಿಗೂ ಬಾಡಿಗೆ