ಚನ್ನಪಟ್ಟಣ -- ಕಳೆದ ರಾತ್ರಿ ಸುರಿದ ಮಳೆಗೆ ಕಾಲುವೆ ಒಡೆದು ಹತ್ತಾರು ಎಕರೆ ಜಮೀನು ನೀರುಪಾಲಾಗಿರುವ ಘಟನೆ ಗುರುವಾರ ತಾಲ್ಲೂಕಿನ ಚನ್ನಂಕೇಗೌಡನ ದೊಡ್ಡಿ ಗ್ರಾಮದಲ್ಲಿ ನಡೆದಿದೆ. ಕೂಡ್ಲೂರು ಕೆರೆಯಿಂದ ಕೋಡಿ ಬಿದ್ದ ನೀರು ಹೊಡಕೆಹೊಸಳ್ಳಿ ಕೆರೆ ಹರಿಯಲು ಇದ್ದ ಕಾಲುವೆ ಒತ್ತುವರಿಯಾದ ಹಿನ್ನೆಲೆಯಲ್ಲಿ ಚನ್ನಂಕೇಗೌಡನ ದೊಡ್ಡಿ ಗ್ರಾಮದ ಬಳಿ ಕೆರೆಯ ನೀರು ಮುಂದೆ ಹೋಗದೆ ಕಾಲುವೆ ಒಡೆದು ಜಮೀನಗಳ ಮೇಲೆ ನುಗ್ಗಿದ ಪೆರಿಣಾಮ ಹತ್ತಾರು ಎಕರೆ ಭೂಮಿ ನೀರಿನಲ್ಲಿ ಮಳುಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಮಹಿಳೆ ಚನ್ನಮ್ಮ ಕಳೆದ ನಾಲ್ಕು ವರ್ಷಗಳ ಹಿಂದೆ ಕಾಲುವೆ ನಿರ್ಮಾಣ ಮಾಡುತ್ತೇವೆ ಎಂದ ಅಧಿ