ಬಾಗಲಕೋಟೆ ನಗರದಲ್ಲಿಂದು ಕೇರಳ ಮೂಲದ ವಿದ್ಯಾರ್ಥಿಗಳಿಂದ ಆಚರಣೆಗೊಂಡ ಕೇರಳಿಯನ್ನರ ಓಣಂ ಹಬ್ಬ ಎಲ್ಲರ ಗಮನ ಸೆಳೆಯಿತು.ಕನ್ನಡದ ನೆಲದಲ್ಲಿ ಓಣಂ ಹಬ್ಬ ಆಚರಿಸುವ ಮೂಲಕ ದೇಶೀಯ ಐಕ್ಯತೆಗೆ ವಿದ್ಯಾರ್ಥಿಗಳು ಸಾಕ್ಷಿಯಾದ್ರು.ಬಾಗಲಕೋಟೆ ನಗರದ ಬಸವೇಶ್ವರ ವೀರಶೈವ ವಿದ್ಯಾವರ್ಧಕ ಸಂಘದ ವೈದ್ಯಕೀಯ ಮಹಾವಿದ್ಯಾಕಯದ ಆವರಣದಲ್ಲಿ ಅನಾವರಣಗೊಂಡ ಓಣಂ ಹಬ್ಬಕ್ಕೆ ಮಾಜಿ ಶಾಸಕರೂ ಆಗಿಸರುವ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ವೀರಣ್ಣ ಚರಂತಿಮಠ ಅವರು ಚಾಲನೆ ನೀಡಿದರು.