ಬೋಯಿನಾಚಪಲ್ಲಿ ಗ್ರಾಮದಲ್ಲಿ ಅಕ್ರಮ ಇ-ಖಾತೆ ವಿರುದ್ಧ ದಲಿತ ಮುಖಂಡರ ಆಕ್ರೋಶ ಶ್ರೀನಿವಾಸಪುರ : ಕಂದಾಯ ಜಮೀನನ್ನು ಅಕ್ರಮವಾಗಿ ಪುರಸಭೆ ಅಧಿಕಾರಿಗಳು ಖಾತೆ ಮಾಡಿದ್ದು ೨೬ ವರ್ಷಗಳಿಂದ ಈ ಜಾಗ ಅಂಬೇಡ್ಕರ್ ತತ್ವ ಚಿಂತನ ಕೇಂದ್ರಕ್ಕೆ ಮೀಸಲಿಡಲು ಹೊರಾಟಗಳನ್ನು ಮಾಡಲಾಗುತ್ತಿದೆ ಎಂದು ದಲಿತ ಮುಖಂಡರು ಪುರಸಭೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದರು. ಶ್ರೀನಿವಾಸಪುರ ತಾಲ್ಲೂಕಿನ ಬೋಯಿನಾಚಪಲ್ಲಿ ಗ್ರಾಮದ ಸರ್ವೇ ನಮ್ ೬ ರಲ್ಲಿ ೫ ಗುಂಟೆ ಜಮೀನು ಸರ್ಕಾರಿ ಗ್ರಾವೆಲ್ ಗುಂಡಿ ಎಂದು ನಮೂದಾಗಿದ್ದು ಈ ಜಾಗ ತಮ್ಮ ತಾತನ ಕಾಲದಿಂದಲೂ ನಾವೇ ಅನುಭವದಲ್ಲಿ ಇದ್ದೇವೆ. ಈ ಜಾಗವನ್ನು ದೀನ ದಲಿತರು ವಿದ್ಯೆ ಕಲಿಯಲಿ ಎಂಬ ಉದ್ದೇ