ಬಸವಕಲ್ಯಾಣ: ನಗರದ ತ್ರಿಪುರಾಂತ ಕೆರೆ ಒಡೆದ ಪರಿಣಾಮ ರೈತರ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದಲ್ಲಿ ಬೆಳೆ ಹಾನಿಯಾದ ಪ್ರಸಂಗ ಜರುಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಸಹಾಯಕ ಆಯುಕ್ತ ಮುಕುಲ್ ಜೈನ್, ತಹಶೀಲ್ದಾರ ಡಾ: ದತ್ತಾತ್ರೇಯ ಗಾದಾ ಸೇರಿದಂತೆ ಅಧಿಕಾರಿಗಳ ತಂಡ, ಜೆಸಿಬಿ ಯಂತ್ರದಿಂದ ಕಲ್ಲು, ಮಣ್ಣಿನಿಂದ ಒಡೆದಿರುವ ಕೆರೆ ಮುಚ್ಚುವ ಮೂಲಕ ನೀರು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ