Download Now Banner

This browser does not support the video element.

ಚಾಮರಾಜನಗರ: ಕಾಳಿಕಾಂಬ ಕಾಲೋನಿಯಲ್ಲಿ ಕಾಡುಪ್ರಾಣಿ ಹಾವಳಿಗೆ ಮೆಕ್ಕೆಜೋಳ‌ ನಾಶ

Chamarajanagar, Chamarajnagar | Sep 5, 2025
ಕಾಡುಪ್ರಾಣಿಗಳ ಹಾವಳಿಗೆ ಮೆಕ್ಕೆಜೋಳ ನಾಶವಾಗಿರುವ ಘಟನೆ ಚಾಮರಾಜನಗರ ತಾಲೂಕಿನ ಕಾಳಿಕಾಂಬ ಕಾಲೋನಿಯಲ್ಲಿ ನಡೆದಿದೆ. ಕಾಳಿಕಾಂಬ ಕಾಲೋನಿ ಗ್ರಾಮದ ರೈತ ಮುನೇಗೌಡ ಎಂಬವರ ಜಮೀನಿಗೆ ಕಾಡುಪ್ರಾಣಿಗಳು ಲಗ್ಗೆ ಇಟ್ಟು ಒಂದೂವರೆ ಎಕರೆಯಷ್ಟು ಬೆಳೆಯನ್ನು ತಿಂದು, ತುಳಿದು ನಾಶ ಮಾಡಿದೆ. ಈ ಸಂಬಂಧ ರೈತ ವೀಡಿಯೋ ಹರಿಬಿಟ್ಟು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಕೊಡಬೇಕೆಂದು ಒತ್ತಾಯಿಸಿದ್ದಾರೆ.
Read More News
T & CPrivacy PolicyContact Us