Download Now Banner

This browser does not support the video element.

ರಾಯಚೂರು: ಭಂಗಿಕುಂಟ ರಸ್ತೆಯಲ್ಲಿ ಸ್ವಚ್ಛತೆಯ ಮಾನ ಹರಾಜು; ಈ ರಸ್ತೆಯಲ್ಲಿ ಮೂಗು ಮುಚ್ಚಿಕೊಂಡೇ ಓಡಾಡಬೇಕು

Raichur, Raichur | Sep 7, 2025
ಬಂಗಿ ಕುಂಟ ರಸ್ತೆಯಲ್ಲಿ ಘನತ್ಯಾಜ್ಯ ಕಾಲಕಾಲಕ್ಕೆ ವಿಲೇವಾರಿಯಾಗದೆ ಗಬ್ಬೆದ್ದು ನಾರುತ್ತಿದೆ ಎಂದು ನಗರ ನಿವಾಸಿ ಶ್ರವಣಕುಮಾರ ಅವರು ಸೆ.7 ರ ರವಿವಾರ ಮಧ್ಯಾಹ್ನ 3 ಗಂಟೆಗೆ ಪಬ್ಲಿಕ್ ಆಪ್‌ ಜೊತೆ ಮಾತನಾಡಿ ತಿಳಿಸಿದ್ದಾರೆ. ಮಹಾನಗರ ಪಾಲಿಕೆ ಸಿಬ್ಬಂದಿಗಳು ಇಟ್ಟಿರುವ ಡಸ್ಟ್ ಬಿನ್ ಗಳ ತುಂಬಾ ಕಸ ತುಂಬಿ ತುಳುಕುತ್ತಿದೆ. ಕಸ ಹೆಚ್ಚಾಗಿ ರಸ್ತೆಯಲ್ಲಿ ಎಲ್ಲೆಂದರಲ್ಲಿ ಬಿಸಾಡಲಾಗಿದ್ದು, ಸ್ವಚ್ಛತೆಯ ಮಾನ ಹರಾಜಾಗಿದೆ. ಆ ಪ್ರದೇಶದಲ್ಲಿ ವಾಹನ ಸವಾರರು, ದಾರಿಹೋಕರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ. ಕೂಡಲೇ ಹೆಚ್ಚುವರಿ ಡಸ್ಟ್ ಬಿನ್ ಇಟ್ಟು ಕಾಲಕಾಲಕ್ಕೆ ತ್ಯಾಜ್ಯ ವಿಲೇವಾರಿ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.
Read More News
T & CPrivacy PolicyContact Us