Download Now Banner

This browser does not support the video element.

ಮೈಸೂರು: ಹಣದ ವಿಚಾರದಲ್ಲಿ ಗಲಾಟೆ ತಳ್ಳಾಟ ನೂಕಾಟ ಹೃದಯಾಘಾತದಿಂದ ಓರ್ವ ವ್ಯಕ್ತಿ ಸಾವು 5 ಮಂದಿ ವಿರುದ್ಧ ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

Mysuru, Mysuru | Apr 23, 2025
ಹಣದ ವಿಚಾರದಲ್ಲಿ ಶುರುವಾದ ಗಲಾಟೆ ಓರ್ವನ ಸಾವಿನಲ್ಲಿ ಅಂತ್ಯವಾದ ಘಟನೆ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಶ್ರೀನಗರದಲ್ಲಿ ನಡೆದಿದೆ.ಮಹಮದ್ ಖಲೀಂ ಎಂಬುವರು ಮೃತಪಟ್ಟಿದ್ದಾರೆ. ಅಬುಅಜರ್,ರೆಹಮಾನ್ ಸೇರಿದಂತೆ 5 ಮಂದಿ ವಿರುದ್ದ ಉದಯಗಿರಿ ಪೊಲೀಸ್ ಠಾಣೆಯಲ್ಕಿ ಪ್ರಕರಣ ದಾಖಲಾಗಿದೆ. ಅಬುಅಜರ್ ನಿಂದ ಮಹಮದ್ ಆಲಿ ರವರು ಆಟೋ ಖರೀದಿಸಿದ್ದರು.80 ಸಾವಿರ ಹಣ ಪಾವತಿಸಬೇಕಿತ್ತು.ನಿಗದಿತ ಸಮಯದಲ್ಲಿ ಹಣ ವಾಪಸ್ ನೀಡಿಲ್ಲ.ಹಣದ ವಿಚಾರದಲ್ಲಿ ಅಬುಅಜರ್,ರೆಹಮಾನ್ ಸೇರಿದಂತೆ 5 ಮಂದಿ ಮಹಮದ್ ಖಲೀಂ ಜೊತೆ ಜಗಳ ಮಾಡಿದ್ದಾರೆ.ಈ ವೇಳೆ ತಳ್ಳಾಟ ನೂಕಾಟವಾಗಿದೆ.ಮಹಮದ್ ಕಲೀಂ ಕುಸಿದುಬಿದ್ದು ಸಾವನ್ನಪ್ಪಿದ್ದಾನೆ.ಗಲಾಟೆ ಸಮಯದಲ್ಲಿ ಮಹಮದ್ ಸಲೀಂ ಗೆ ಹೃದಯಾಘಾತವಾಗಿದೆ ಎಂದು ಹೇಳಲಾಗಿದೆ.ಗಲಾಟೆ ಮಾಡಿದವರ ವಿರುದ್ಧ ಪ್ರಕರಣ ದಾಖಲಾಗಿದೆ.
Read More News
T & CPrivacy PolicyContact Us