ಮಂಡ್ಯ ನಗರದ ರಾಜ್ಯ ಸಾರಿಗೆ ಬಸ್ ನಿಲ್ದಾಣದಲ್ಲಿ ಬಸ್ ಹತ್ತುವಾಗ ಮಹಿಳೆಯ 210 ಗ್ರಾಂ ಚಿನ್ನಾಭರಣ ಕಳುವಾಗಿರುವ ಘಟನೆ ಜರುಗಿದೆ. ಮರೀಗೌಡ ಬಡಾವಣೆಯ ವರಲಕ್ಷ್ಮಿ ಪ್ರಕಾಶ್ ಚಿನ್ನಾಭರಣ ಕಳೆದುಕೊಂಡವರು. ಬೆಂಗಳೂರಿನ ಆತ್ತಿಗುಪ್ಪೆಯಲ್ಲಿರುವ ಮಕ್ಕಳನ್ನು ನೋಡಲು ದಂಪತಿ ತೆರಳುವಾಗ ವ್ಯಾನಿಟಿ ಬ್ಯಾಗ್'ನಲ್ಲಿ ಹಾಕಿಕೊಂಡು ತೆರಳುವಾಗ ಕಳ್ಳರು ಕೈಚಳಕ ತೋರಿದ್ದಾರೆ. ಬಸ್ ಹತ್ತುವ ಸಮಯದಲ್ಲಿ ಯಾರೋ ಕಳ್ಳರು ನೂಕುನುಗ್ಗಲು ಉಂಟುಮಾಡಿ ಗಮನ ಬೇರೆಡೆ ಸೆಳೆದು ವ್ಯಾನಿಟಿ ಬ್ಯಾಗ್'ನಲ್ಲಿದ್ದ ವಿವಿಧ ಮಾದರಿಯ ಚಿನ್ನಾಭರಣ ಕಳವು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಘಟನೆ ಕುರಿತು ನಗರ ಪಶ್ಚಿಮ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿ ತನಿಖೆ ಅರಂಭಿಸಲಾಗಿದೆ ಎಂದು ಭಾನುವಾರ ನಗರದಲ್ಲಿ ಎಸ್ಪಿ ಕಚೇರಿ ಮಾಹಿತಿ ನೀಡಿದೆ.