ಗುಂಡ್ಲುಪೇಟೆ ಪಟ್ಟಣದ ತಾಲೂಕು ಸಾರ್ವಜನಿಕ ಆಸ್ಪತ್ರೆ ಮುಂಭಾಗದ ನಿಸರ್ಗ ಲೇಔಟ್ ನಲ್ಲಿ ಸೋಮವಾರ ರಾತ್ರಿ ಹುಲಿ ಓಡಾಟ ನಡೆಸಿದೆ. ಹುಲಿ ಓಡಾಡುತ್ತಿರುವ ದೃಶ್ಯ ಪಕ್ಕದ ಮನೆ ಮಾಲೀಕರ ಸಿಸಿ ಟಿವಿ ಕ್ಯಾಮಾರದಲ್ಲಿ ಸೆರೆಯಾಗಿದೆ. ಇದರಿಂದ ಸ್ಥಳೀಯ ನಿವಾಸಿಗರು ಹಾಗೂ ಸಾರ್ವಜನಿಕರು ಭಯಭೀತರಾಗಿದ್ದಾರೆ. ಗುಂಡ್ಲುಪೇಟೆ ಬಫರ್ ಜೋನ್ ಅರಣ್ಯ ಇಲಾಖೆ ಅಧಿಕಾರಿಗಳು ಹುಲಿ ಸೆರೆ ಹಿಡಿಯಬೇಕೆಂದು ಸ್ಥಳೀಯರಾದ ಸಾಹುಲ್ ಹಮೀದ್ ಹಾಗೂ ವಾರ್ಡ್ ನಿವಾಸಿಗರು ಒತ್ತಾಯಿಸಿದ್ದಾರೆ.