ಚಾಮರಾಜನಗರ: ಜಿಲ್ಲೆಯ ಯಳಂದೂರು ತಾಲೂಕಿನ ಬಿಳಿಗಿರಿರಂಗನಬೆಟ್ಟದ ವೀವ್ ಪಾಯಿಂಟ್ ಬಳಿ ಭಕ್ತರು ಹಾಗೂ ಪ್ರವಾಸಿಗರಿಗೆ ಅನಿರೀಕ್ಷಿತವಾಗಿ ಹುಲಿ ದರ್ಶನವಾಗಿದ್ದು, ಈ ಕ್ಷಣ ಎಲ್ಲರಲ್ಲೂ ರೋಮಾಂಚನ ಮೂಡಿಸಿದೆ. ಬಿಳಿಗಿರಿರಂಗಸ್ವಾಮಿ ದೇವಸ್ಥಾನದ ಹಿಂಭಾಗದಲ್ಲಿರುವ ವೀವ್ ಪಾಯಿಂಟ್‌ನಲ್ಲಿ, ಬಂಡೆಗಲ್ಲುಗಳ ಮೇಲೆ ಬಿಸಿಲಿಗೆ ಮೈ ಒಡ್ಡಿ ಮಲಗಿದ್ದ ಹುಲಿಯೊಂದನ್ನು ಭಕ್ತರು ಕಾಣುವ ಭಾಗ್ಯದನ್ನು ಪಡೆದರು. ಈ ದೃಶ್ಯವನ್ನು ನೇರವಾಗಿ ಕಂಡು ಕೆಲವು ಮಂದಿ ತಕ್ಷಣವೇ ತಮ್ಮ ಮೊಬೈಲ್‌ಗಳಲ್ಲಿ ದೃಶ್ಯ ಸೆರೆಹಿಡಿದರು. ಈ ಘಟನೆ, ಬಿಆರ್ ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಹುಲಿಗಳ ಸಂಖ್ಯೆ ದಿನೇದಿನೇ ಹೆಚ್ಚಾಗುತ್ತಿದೆ ಎಂಬುದಕ್ಕೆ ಜೀವಂತ ಸಾಕ್ಷಿಯಾಗಿದೆ.