ಪರಿಸರ ನಮಗೆ ಎಲ್ಲಾ ರೀತಿಯ ಕೊಡಿಗೆ ನೀಡಿದೆ. ನಾವು ಹುಟ್ಟಿದಾಗ ಯಾವುದೇ ಜಾತಿ, ಮತ ಇರುವುದಿಲ್ಲ, ನಮ್ಮ ನಡವಳಿಕೆಯ ಮೇಲೆ ಜಾತಿ ಮತ ಗುರ್ತಿಸುತ್ತದೆ. ಪಂಚಭೂತಗಳು ಸರಿಸಮಾನವಾಗಿದ್ದಾಗ ನಮ್ಮಲ್ಲಿ ಏಕೆ ಬೇಕು ಜಾತಿ, ಬೇದಬಾವ ಎಂದು ಪ್ರಶ್ನಿಸದರು.ಒಟ್ಟಿನಲ್ಲಿ ನಾವೆಲ್ಲರೂ ಸೇರಿ ವಿಶಾಲವಾಗಿ ಯೋಚನೆ ಮಾಡಿ ಸಮಾಜದಲ್ಲಿ ಅಸ್ಪೃಶ್ಯತೆ ಹೋಗಲಾಡಿಸಬೇಕಾಗಿದೆ ಎಂದು ಕ. ಸಂಸ್ಕೃತಿ ಇಲಾಖೆ ನಿರ್ದೇಶಕಿ ವಿಜಯಲಕ್ಷ್ಮಿ ಹೇಳಿದರು. ಮುದಿಮಡಗು ಗ್ರಾಮದ ಶ್ರೀ ಕೋದಂಡರಾಮಸ್ವಾಮಿ ದೇವಾಲಯ ಮುಂಭಾಗದಲ್ಲಿ ಭಾನುವಾರ ಅರಿವು ಭಾರತ ವತಿಯಿಂದ ಸಹಭೋಜನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಅರಿವು ಭಾರತ ಅರಿವು ಶಿವಪ್ಪ ಮಾತನಾಡಿ ಈಗಾಗಲೇ ಅರಿವು ಭಾರತ ಈಗಾಗಲೇ 500 ಕಾರ್ಯಕ್ರಮಗಳನ್ನ ಮಾಡಲಾಗಿದೆ ಎಂದರು