ನಗರದ ಖಾಸಗಿ ಹೋಟೆಲ್ ನಲ್ಲಿ ಕಾರು ಚಾಲಕರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಧಾರವಾಡ ಜಿಲ್ಲೆಕುಂದಗೋಳ ತಾಲೂಕು ಯರಿನಾರಾಯಣಪುರ ಗ್ರಾಮದ ಮಹಾಂತೇಶ ಕಲ್ಲಣ್ಣನವರ (27) ಮೃತ ದುರ್ದೈವಿಯಾಗಿದ್ದಾರೆ. ಈತ ಕಳೆದ ಆರು ತಿಂಗಳಿನನಿಂದ ದಾವಣಗೆರಿಯಲ್ಲಿ ಕಾರು ಚಾಲಕನಾಗಿ ಕೆಲಸ ಮಾಡಿಕೊಂಡಿರುತ್ತಾನೆ. ಯಾವುದೋ ಕಾರಣಕ್ಕೆ ಮನಸ್ಸಿಗೆ ಬೇಜಾರ ಮಾಡಿಕೊಂಡು ಖಾಸಗಿ ಹೋಟೆಲ್‌ನಲ್ಲಿ ವಿಷ ಸೇವಿಸಿ ಸ್ಥಳದಲ್ಲೇ ಮೃತಪಟ್ಟಿದ್ದಾನೆಂದು ಮೃತನ ತಂದೆ ಕಲ್ಲಪ್ಪ ಕಲ್ಪಣ್ಣನವರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ. ಹಾವೇರಿ ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.