ಗಣೇಶೋತ್ಸವದ 4ನೇ ದಿನದ ಅಂಗವಾಗಿ ಶನಿವಾರ ವಿಶೇಷವಾಗಿ ವಾರ್ಡ್ನಿನ ಮಹಿಳೆಯರ ಪ್ರತಿಭೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರಂಗೋಲಿ ಸ್ಪರ್ಧೆ ಆಯೋಜನೆಗೊಂಡಿತು ನೂರಾರು ಬಣ್ಣಗಳಿಂದ ರಂಗೋಲಿ ಅಲಂಕರಿಸಿದ ಮಹಿಳೆಯರು ತಮ್ಮ ಕಲಾತ್ಮಕ ನೈಪುಣ್ಯತೆಯನ್ನು ಮೆರೆದರು ಬಣ್ಣಬಣ್ಣದ ವಿನ್ಯಾಸಗಳು ಉತ್ಸವದ ಸೌಂದರ್ಯವನ್ನು ಹೆಚ್ಚಿಸಿತು. ಈ ವೇಳೆ ವಾರ್ಡ್ನಿನ ಮುಖಂಡ ವಕೀಲರಾದ ಕೆ.ಎಂ ಮುನೆಗೌಡ ಮಾತನಾಡಿ ನಮ್ಮ ವಾರ್ಡ್ನ ಗಣೇಶೋತ್ಸವವು ಕೇವಲ ಧಾರ್ಮಿಕ ಹಬ್ಬವಲ್ಲ,ಇದು ನಮ್ಮ ಹಿಂದು-ಮುಸ್ಲಿಂರ ಭಾವೈಕ್ಯತೆಯ ಸಂಕೇತವಾಗಿದೆ. ಇಲ್ಲಿ ನಾವು ಜಾತಿ-ಭೇದ,ಮತಭೇದಗಳನ್ನು ಮರೆತು ಒಗ್ಗಟ್ಟಿನಿಂದ ಆಚರಿಸಿದ್ದೇವೆ ಎಂದರು