ಬೆಳಗಾವಿ ಬಿಮ್ಸ್ ಆಸ್ಪತ್ರೆಯಲ್ಲಿ ಅಪರಿಚಿತ ಯುವತಿಯಿಂದ ಚಿಕಿತ್ಸೆ ನೀಡಿದ ಪ್ರಕರಣ ಹಿನ್ನಲೆ ಇಂದು ಶುಕ್ರವಾರ 11 ಗಂಟೆಗೆ ನಗರದಲ್ಲಿ ಬಿಮ್ಸ್ ನಿರ್ದೇಶಕ ಅಶೋಕ ಶೆಟ್ಟಿ ಅವರಿಂದ ಆಂತರಿಕ ತನಿಖೆಗೆ ಆದೇಶ ನೀಡಿದ್ದು 4-9-2025ರಂದು ವಿದ್ಯಾರ್ಥಿ ಅಂತಾ ಹೇಳಿಕೊಂಡು ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ ಯುವತಿ ಆಸ್ಪತ್ರೆಯಲ್ಲಿ, ವಿದ್ಯಾರ್ಥಿ ವಸತಿ ನಿಲಯ, ಓಪಿಡಿಯಲ್ಲಿ ಓಡಾಟ ಹಿನ್ನೆಲೆ ಮೂರು ಸದಸ್ಯರನ್ನೊಳಗೊಂಡ ಒಂದು ಸಮಿತಿ ರಚನೆ ಮಾಡಿ ತನಿಖೆಗೆ ಆದೇಶ ನೀಡಿದ ಬಿಮ್ಸ್ ನಿರ್ದೇಶಕ ಅಶೋಕ ಶೆಟ್ಟಿ ಸಮಿತಿಯಲ್ಲಿ ಡಾ.ಈರಣ್ಣಾ ಪಲ್ಲೇದ್, ಡಾ.ಕೇಶವ್ ಹೆಚ್.ಬಿ, ಡಾ.ವಸಂತ ಕಬ್ಬೂರ ನೇತೃತ್ವದಲ್ಲಿ ತನಿಖೆಗೆ ಆದೇಶ ಒಂದು ವಾರದೊಳಗೆ ತನಿಖೆ ನಡೆಸಿ ಕಚೇರಿಗೆ ವರದಿ ಸಲ್ಲಿಸಲು ಸೂಚನೆ ನೀಡಿದ ಅಶೋಕ ಶೆಟ್ಟಿ.