ವಿಧಾನಸೌಧದಲ್ಲಿ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣ್ ಅವರು ಮಂಗಳವಾರ ಸಂಜೆ 5 ಗಂಟೆ ಸುಮಾರಿಗೆ ಮಾಧ್ಯಮಗಳ ಜೊತೆ ಮಾತನಾಡಿ, ನಿನ್ನೆ ನಡೆದ ಪರಿಶಿಷ್ಟ ಜಾತಿ ವಿಜಿಲೆನ್ಸ್ ಸಭೆಯಲ್ಲಿ ಕಾಡುಗೊಡಿ ದಿನ್ನೂರು ಗ್ರಾಮದ ಜಮೀನ ಬಗ್ಗೆ ಚರ್ಚೆ ಆಗಿದೆ. ಅಕ್ರಮವಾಗಿ ಜಮೀನನ್ನು ಕಬ್ಜ ಮಾಡಿರುವುದು ಸಿಎಂ ಸಿದ್ದರಾಮಯ್ಯ ಗಮನಕ್ಕೆ ತಂದಿದ್ದೇನೆ. ಕೋರ್ಟ್ ಆದೇಶ ಇರೋದೇ ಬೇರೆ ಆದರೆ ಅಧಿಕಾರಿಗಳು ಅಕ್ರಮವಾಗಿ ಜಮೀನನ್ನು ವಶಕ್ಕೆ ಪಡೆದಿದ್ದಾರೆ. KIADB ಜಮೀನನ್ನು ಈಗಾಗಲೇ ಹಂಚಿಕೆ ಆಗಿದೆ. ಅದರಲ್ಲಿ 250 ಎಕರೆ ರೈಲ್ವೆಗೆ ಸೇರಿದೆ, ಇನ್ನೂ 45 ಎಕರೆ ಜಮೀನನ್ನು ಮೆಟ್ರೋಗೆ ಕೊಟ್ಟಿದ್ದಾರೆ. ಇನ್ನು 120 ಎಕರೆ ಮಾತ್ರವೇ ಜಮೀನು ಉಳಿದಿದೆ. ಅದು ಸಂಪೂರ್ಣವಾದ ರೈತರ ಜಮೀನು.