ಕಲಬುರಗಿ : ಕಲಬುರಗಿ ಜಿಲ್ಲೆ ಕಮಲಾಪುರ ತಾಲೂಕಿನ ಸೊಂತ ಗ್ರಾಮದಲ್ಲಿ ಶ್ರಾವಣ ಮಾಸದ ನಿಮ್ಮಿತ್ತ ಅಭಿನವ ಶ್ರೀ ಶಂಕರಲಿಂಗ ಮಹಾರಾಜರು ಕೈಗೊಂಡಿದ್ದ ಒಂದು ತಿಂಗಳ ಮೌನ ಅನುಷ್ಠಾನ ಇಂದು ಮುಕ್ತಾಯವಾಗಿದೆ.. ಆ24 ರಂದು ಬೆಳಗ್ಗೆ 11 ಗಂಟೆಗೆ ಶ್ರೀಗಳು ಮೌನ ಅನುಷ್ಠಾನದಿಂದ ಹೊರಬಂದ ಬಳಿಕ ನೂರಾರು ಭಕ್ತರು ಮಠಕ್ಕೆ ಬಂದು ಶ್ರೀ ಅಭಿನವ ಶಂಕರಲಿಂಗ ಮಹಾರಾಜರ ದರ್ಶನ ಪಡೆದಿದ್ದಾರೆ.. ಲೋಕಕಲ್ಯಾಣಕ್ಕಾಗಿ, ವಿಶ್ವಶಾಂತಿಗಾಗಿ ಶ್ರೀಗಳು ಮೌನ ಅನುಷ್ಠಾನ ಕೈಗೊಂಡಿದ್ದರು.