ಅಪಾಯಕಾರಿ ಆಯುಧ ಹಿಡಿದು ಅಲೆದಾಡುತ್ತಿದ್ದ ಭಾಸ್ಕರ ಸಿದ್ದಿ ಎನ್ನುವವನ್ನು ಯಲ್ಲಾಪುರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿರುವ ಬಗ್ಗೆ ನಗರದಲ್ಲಿ ಎಸ್ಪಿ ಕಚೇರಿ ಗುರುವಾರ ಸಂಜೆ 7ಕ್ಕೆ ಮಾಹಿತಿ ನೀಡಿದ್ದಾರೆ. ಅಂಕೋಲಾ ತಾಲೂಕಿನ ಹಳವಳ್ಳಿಯ ಭಾಸ್ಕರ ಸಿದ್ದಿ ಗುರುವಾರ ಯಲ್ಲಾಪುರಕ್ಕೆ ಆಗಮಿಸಿದ್ದ. ಪಟ್ಟಣದ ನೂತನ ನಗರದ ಜಡ್ಡಿ ಬಳಿ ಆಯುಧ ಹೊಂದಿರುವ ಬಗ್ಗೆ ಅನುಮಾನಗೊಂಡ ಪೊಲೀಸರು ವಿಚಾರಣೆ ನಡೆಸಿ ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣದ ತನಿಖೆ ಮುಂದುವರಿದಿದೆ.