ಚಿತ್ರದುರ್ಗದಲ್ಲಿಂದು ಹಿಂದೂ ಮಹಾ ಗಣಪತಿಯ ಅದ್ದೂರಿ ಪ್ರತಿಷ್ಠಾಪನೆ ನೆರವೇರಿದೆ. ವಿಶ್ವ ಹಿಂದೂ ಪರಿಷದ್ ಬಜರಂಗದಳದ ವತಿಯಿಂದ ನಗರದ ಪಂಚಾಚಾರ್ಯ ಕಲ್ಯಾಣ ಮಂಟಪದ ಬಳಿಯ ಜೈನ್ ಧಾಮದ ಸಿಂದೂರ ವೇದಿಕೆಯಲ್ಲಿ 18 ನೇ ವರ್ಷದ ಹಿಂದೂ ಮಹಾ ಗಣಪತಿಯ ಪ್ರತಿಷ್ಟಾಪನೆ ಮಾಡಲಾಗಿದ್ದು ಬುದವಾರ ಮಧ್ಯಾಹ್ನ 12 ಗಂಟೆಗೆ ಹಿಂದೂ ಮಹಾ ಗಣಪತಿಯನ್ನ ಪ್ರತಿಷ್ಟಾಪನೆ ಮಾಡುವ ಮೂಲಕ ಹಿಂದೂ ಮಹಾ ಗಣಪತಿ ಉತ್ಸವಕ್ಕೆ ಚಾಲನೆ ನೀಡಲಾಯಿತು