ಸೆಪ್ಟೆಂಬರ್ 3 ಸಂಜೆ 6 ಗಂಟೆಯ ಸುಮಾರಿಗೆ ವಿಶೇಷ ಚೇತನ ವ್ಯಕ್ತಿಯೊಬ್ಬ ಬಿಎಂಟಿಸಿ ಬಸ್ ಹತ್ತುವ ಮುನ್ನವೇ ಬಸ್ ಮೂವ್ ಮಾಡಿರುವಂತಹ ಘಟನೆ ನಡೆದಿದೆ. ವಸಂತ ನಗರದಲ್ಲಿ ನಡೆದಿರುವ ಘಟನೆ ಇದಾಗಿದ್ದು ಬಿಎಂಟಿಸಿ ಚಾಲಕನ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತ ಆಗಿದೆ. ಇತ್ತೀಚಿಗಷ್ಟೇ ನಗರದ ಹಲವು ಕಡೆ ಬಿಎಂಟಿಸಿ ಡೋರ್ ಲಾಕ್ ಆಗದೆ ಸಾವಿನ ಸಂಖ್ಯೆ ಜಾಸ್ತಿಯಾಗಿತ್ತು. ಇಂತಹ ಹೊತ್ತಲ್ಲೇ ವಿಶೇಷ ಚೇತನ ವ್ಯಕ್ತಿ ಬಸ್ ಹತ್ತುವ ಮುನ್ನವೇ ಈ ರೀತಿಯಾಗಿ ಮಾಡಿರುವಂತದ್ದು ಅನೇಕರ ಕಣ್ಣು ಕೆಂಪು ಮಾಡಿದೆ.