ಮದ್ದೂರು ತಾಲ್ಲೂಕು ಯಡಗನಹಳ್ಳಿ ಗ್ರಾಮದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ ನಡೆಸಿರುವ ಘಟನೆ ಜರುಗಿದೆ. ಗ್ರಾಮದ 65 ವರ್ಷದ ಸಿದ್ದರಾಮು ಎಂಬಾತನೇ ಅತ್ಯಾಚಾರ ನಡೆಸಿದನೆಂದು ಹೇಳಲಾದ ಆರೋಪಿಯಾಗಿದ್ದು, ಗ್ರಾಮದ ದೊಡ್ಡಕುಳ್ಳಯ್ಯನ ಮಗ ರಾಜು ಎಂಬಾತನ ಪತ್ನಿ ಗೌರಮ್ಮ ಎಂಬುವವರು ದೂರು ನೀಡಿದ್ದು, ನಾನು ಕೂಲಿ ಕೆಲಸಕ್ಕೆ ಹೋಗಿದ್ದ ಸಂದರ್ಭದಲ್ಲಿ 4 ನೇ ತರಗತಿ ಓದುತ್ತಿರುವ ಮಗಳಿಗೆ ಒಬ್ಬಟ್ಟು ಕೊಡುವುದಾಗಿ ಪುಸಲಾಯಿಸಿ ತನ್ನ ಮನೆಗೆ ಕರೆದೊಯ್ದು ಅತ್ಯಾಚಾರ ನಡೆಸಿದ್ದಾನೆ. ನಾನು ಕೆಲಸ ಮುಗಿಸಿ ಮನೆಗೆ ಬಂದಾಗ ಮಗಳು ಅಳುತ್ತಿದ್ದು, ಅಳುತ್ತಿದ್ದ ಬಗ್ಗೆ ವಿಚಾರಿಸಿದಾಗ ನಡೆದ ಸಂಗತಿಯನ್ನು ತಿಳಿಸಿದ್ದಾಳೆ. ಹಾಗಾಗಿ ಸಿದ್ದರಾಮು ಮೇಲೆ ಕ್ರಮ ಕೈಗೊಳ್ಳಬೇಕೆಂದು ಗೌರಮ್ಮ ಪೊಲೀಸರಿಗೆ ನೀಡಿರುವ ದೂ