ದಾಂಡೇಲಿ : ನಗರಸಭೆಯ ಸಾಮಾನ್ಯ ಸಭೆಯು ನಗರಸಭೆಯ ಸಭಾಭವನದಲ್ಲಿ ಸೋಮವಾರ ಸಂಜೆ 7:30 ಗಂಟೆ ಸುಮಾರಿಗೆ ಸಂಪನ್ನಗೊಂಡಿತು. ನಗರಸಭೆಯ ಅಧ್ಯಕ್ಷ ಅಷ್ಪಾಕ್ ಶೇಖ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಹಲವು ವಿಷಯಗಳಿಗೆ ಬಗ್ಗೆ ಚರ್ಚೆ ನಡೆಯಿತು. ನಗರ ಸಭೆಯಡಿ ಕೈಗೊಳ್ಳುವ ವಿವಿಧ ಯೋಜನೆಗಳ ಟೆಂಡರ್ ಪ್ರಕ್ರಿಯೆಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡಿ ಮೂರು ವರ್ಷಗಳ ಅವಧಿ ನಿಗಧಿಪಡಿಸಲಾಯಿತು. ಒಳ ಕ್ರೀಡಾಂಗಣ ನಿರ್ವಹಣೆಯ ಕರಿತಂತೆ ಸಭೆಯಲ್ಲಿ ನಿರ್ಣಯವನ್ನು ಕೈಗೊಳ್ಳಲಾಯ್ತು.