ಚಿನ್ನಸ್ವಾಮಿ ಕ್ರೀಡಾಂಗಣ ಉಳಿವಿಗಾಗಿ ಒತ್ತಾಯಿಸಿ ವಾಟಾಳ್ ನಾಗರಾಜ್ ಪ್ರತಿಭಟನೆ ನಡೆಸಿದರು. ಚಿನ್ನಸ್ವಾಮಿ ಕ್ರೀಡಾಂಗಣದ ಮುಖ್ಯದ್ವಾರದಲ್ಲಿ ವಾಟಾಳ್ ನಾಗರಾಜ್ ಶನಿವಾರ ಸಂಜೆ 4 ಗಂಟೆ ಸುಮಾರಿಗೆ ಏಕಾಂಗಿ ಸತ್ಯಾಗ್ರಹ ನಡೆಸಿದರು. ಕಾಲ್ತುಳಿತ ಪ್ರಕರಣದ ಬಳಿಕ ಮೌನವಾಗಿರುವ ಚಿನ್ನಸ್ವಾಮಿ ಕ್ರೀಡಾಂಗಣ, ಕ್ರೀಡಾಂಗಣದ ಚಟುವಟಿಕೆಗಳು ಸ್ಥಬ್ದವಾಗಿರುವ ಹಿನ್ನೆಲೆ.. ವಿಶ್ವ ಮಹಿಳಾ ಪಂದ್ಯಾವಳಿಗಳು ಬೆಂಗಳೂರು ಬಿಟ್ಟು ಮುಂಬೈಗೆ ಸ್ಥಳಾಂತರವಾಗಬಾರದು. ಕಾಲ್ತುಳಿತದಲ್ಲಿ ಮಡಿದವರ ಕುಟುಂಬಕ್ಕೆ ಸರ್ಕಾರ ಹಾಗೂ ಕ್ರೀಡಾ ಸಂಸ್ಥೆಯಿಂದ 5ಕೋಟಿ ರೂ. ಪರಿಹಾರ ನೀಡಿ ಎಂದು ಆಗ್ರಹಿಸಿದರು.