ಯಾದಗಿರಿ ನಗರದ ವಾರ್ಡ್ ಸಂಖ್ಯೆ 26ರಲ್ಲಿ ಚರಂಡಿ ವ್ಯವಸ್ಥೆ ಸರಿಯಾಗಿ ಇಲ್ಲದ ಕಾರಣ ಎಲ್ಲ ಮನೆಗಳ ಮುಂದೆ ಕೊಚ್ಚಿ ನೀರು ನಿಂತಿದ್ದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾನಿರೋವರೆಗೂ ಮಂಗಳವಾರ ಮಧ್ಯಾನ ಅನೇಕ ಮಹಿಳೆಯರು ಬೇಸರ ವ್ಯಕ್ತಪಡಿಸಿ, ಚರಂಡಿ ವ್ಯವಸ್ಥೆ ಕಲ್ಪಿಸಬೇಕು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು ಆಗ್ರಹಿಸಿದ್ದಾರೆ. ಈ ಸ್ಥಳಕ್ಕೆ ನಗರಸಭೆ ಮಾಜಿ ಸದಸ್ಯ ಅಬ್ದುಲ್ ಕರೀಂ ನಾಲ್ವರಿ ಭೇಟಿ ನೀಡಿ ತೀವ್ರ ಬೇಸರ ವ್ಯಕ್ತಪಡಿಸಿದ್ದಾರೆ. ಚರಂಡಿ ನೀರಿನಲ್ಲಿಯೇ ಕುಡಿಯುವ ನೀರಿನ ಪೈಪ್ ಕೂಡ ಇದ್ದು ಇಂತಹ ನೀರನ್ನೇ ಕುಡಿಯಲಿದ್ದೇವೆ ಎಂದು ಮಹಿಳೆಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.