ಹೆಚ್. ಗೋವಿಂದಪ್ಪ ಕೋಲಾರ ತಾಲ್ಲೂಕು ವಕ್ಕಲೇರಿ ಹೋಬಳಿ, ಚಿಲುವನಹಳ್ಳಿ ಗ್ರಾಮದ ಜಮೀನಿನಲ್ಲಿ ರಾತ್ರಿ ಯಾರೋ ಕಳ್ಳರು ಸುಮಾರು 20 ಲಕ್ಷರೂ ಬೆಳೆ ಬಾಳುವಂತಹ ಸುಮಾರು 20 ಮರಗನ್ನು ಕಡಿದು5 ಮರಗಳನ್ನು ತೆಗೆದುಕೊಂಡು ಉಳಿದ 15 ಮರಗಳನ್ನು ಅಲ್ಲಿಯೇ ಬಿಟ್ಟು ಹೋಗಿರುತ್ತಾರೆ. ಈಕುರಿತು ಎಸ್ಪಿ ನಿಖಿಲ್ ರವರ ಮಾರ್ಘ ದರ್ಶನದಲ್ಲಿ ಗ್ರಾಮಾಂತರ ಪೊಲೀಸರು ಕಾರ್ಯಾಚರಣೆ ನಡೆಸಿ ಮೂರಾಂಡಹಳ್ಳಿ ಕ್ರಾಸ್ ಬಳಿ ದ್ವಿಚಕ್ರ ವಾಹನದಲ್ಲಿ ಬಂದ ಆರೋಪಿ ವಿನೋದ ಚೀಲದಲ್ಲಿ1,30,000 ಬೆಲೆಬಾಳುವ 5 ಶ್ರೀಗಂಧದ ತುಂಡುಗಳು ದೊರೆತಿದ್ದು, ಪ್ರಕರಣದಲ್ಲಿ,ದ್ವಿಚಕ್ರ ವಾಹನವನ್ನು ಅಮಾನತ್ತುಪಡಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಗ್ರಾಮಾಂತರ ಪೊಲೀಸರು ಗುರುವಾರ ಪ್ರಕಟಣೆಯಲ್ಲಿಯಲ್ಲಿ ತಿಳಿಸಿದ್ದಾರೆ