ಕಲಬುರಗಿ : ಕಲಬುರಗಿಯ ಶ್ರೀ ಶರಣಬಸವೇಶ್ವರ ಸಂಸ್ಥಾನದ ಎಂಟನೇ ಪೀಠಾಧಿಪತಿ ಶ್ರೀ ಶರಣಬಸಪ್ಪ ಅಪ್ಪಾ ಲಿಂಗೈಕ್ಯ ಹಿನ್ನಲೆಯಲ್ಲಿ, ಇಂದು ದಾಸೋಹ ಮಹಾಮನೆಗೆ ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭೇಟಿ ನೀಡಿದ್ದಾರೆ.. ಆಗಷ್ಟ್ 31 ರಂದು ಮಧ್ಯಾನ 12 ಗಂಟೆಗೆ ದಾಸೋಹ ಮಹಾಮನೆಗೆ ಭೇಟಿ ನೀಡಿದ ಶಾಸಕ ಯತ್ನಾಳ್, ಲಿಂಗೈಕ್ಯ ಶ್ರೀ ಶರಣಬಸಪ್ಪ ಅಪ್ಪಾರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಶೃದ್ಧಾಂಜಲಿ ಅರ್ಪಿಸಿದರು. ಬಳಿಕ ಅಪ್ಪಾರ ಪುತ್ರ ಒಂಭತ್ತನೇ ಪೀಠಾಧಿಪತಿ ಚಿರಂಜಿವಿ ಶ್ರೀ ದೊಡ್ಡಪ್ಪರನ್ನ ಮಾಲರ್ಪಣೆ ಮಾಡಿ ಗೌರವಿಸಿ ಮಾತೋಶ್ರೀ ಶ್ರೀಮತಿ ದಾಕ್ಷಾಯಿಣಿ ಅವ್ವರನ್ನ ಭೇಟಿ ಮಾಡಿದ್ದಾರೆ..