ಜಮಖಂಡಿ ನಗರದ ಐತಿಹಾಸಿಕ ಪಟವರ್ಧನ ರಾಜರ ಆಳ್ವಿಕೆಯಲ್ಲಿಮ ಜಮಖಂಡಿ ನಗರದ ಹೃದಯಭಾಗದಲ್ಲಿರೋ ಐತಿಹಾಸಿಕ ಉದ್ಯಾನವನ ಪರಶಿರಾಮ ಉದ್ಯಾನವನ ರಾಜರ ಹೆಸರಿನಲ್ಲಿರುವ ಏಕೈಕ ಉದ್ಯಾನವನ. ನಗರಕ್ಕೆ ವಿವಿಧ ಕೆಲಸಗಳ ನಿಮಿತ್ಯ ಬರುವ ಜನರಿಗೆ ವಿಶ್ರಾಂತಿ ತಾಣ. ಆದರೆ, ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸೂಕ್ತ ನಿರ್ವಹಣೆ ಇಲ್ಲದೇ ಆ ಪಾರ್ಕ್ ಅನಾಥವಾಗಿದೆ. ವಾಯುವಿಹಾರಿಗಳಿಗೆ ಅನುಕೂಲವಾಗಲಿ ರಂದಜ ಪಟವರ್ಧನ ರಾಜರು ನಿರ್ಮಾಣ ಮಾಡಿರೋ ಉದ್ಯಾನವನ ಈಗ ಹಾಳು ಬಿದ್ದಿದೆ. ಸಂಜೆಯಾದ್ರೆ ಕುಡುಕರ ಅಡ್ಡವಾಗಿದೆ.ಸಾರ್ವಜನಿಕರಿಗೆ ಕಿರಿಕಿರಿ ಯುಂಡಾಗುತ್ತಿದೆ. ಸಂಬಂಧಪಟ್ಟವರು ಗಮನ ಹರಿಸಬೇಕಿದೆ.