ಗುಡಿಬಂಡೆಯ ಜಿ.ಟಿ. ಶ್ರೀನಿವಾಸ್ ರವರ ಹೊಲದಲ್ಲಿ ಜಿಲ್ಲಾ ಪರಿಸರ ವೇದಿಕೆ ವತಿಯಿಂದ 50 ಟಿಕ್ ಮರಗಳನ್ನು ನಾಟಿ ಮಾಡಲಾಯಿತು.ಕಾರ್ಯಕ್ರಮದ ಉದ್ಘಾಟನೆಯನ್ನು ಜಿಲ್ಲಾ ಪರಿಸರ ವೇದಿಕೆ ಅಧ್ಯಕ್ಷ ಡಾ. ಗುಂಪು ಮರದ ಆನಂದ್ ಉಚಿತ ವಾಗಿ 50 ಗಿಡಗಳನ್ನು ನೀಡಿ ಮಾತನಾಡಿ, ಪ್ರತಿಯೊಬ್ಬರೂ ತಮ್ಮ ಹೊಲಗಳ ಬದು ಗಳಲ್ಲಿ ಗಿಡಗಳನ್ನು ನೆಟ್ಟು ಪರಿಸರ ಸಂರಕ್ಷಣಾ ಮಾಡಬೇಕು. ಹಾಗೂ ರೈತರು ಹೆಚ್ಚು ಹೆಚ್ಚು ಗಿಡಗಳನ್ನು ತಮ್ಮ ಹೊಲಗಳಲ್ಲಿ ಬೆಳೆಸಿದರೆ ಮಳೆ ಬರುತ್ತದೆ ಬೆಳೆಯಾಗುತ್ತದೆ. ಮತ್ತು ವಾತಾವರಣ ತಂಪಾಗಿರುತ್ತದೆ.ಹಾಗೂ ನಮ್ಮ ಜೀವನ ಸಾರ್ಥಕವಾಗಬೇಕಾದರೆ ಪ್ರತಿಯೊಬ್ಬರು ಗಿಡಗಳನ್ನು ನೆಟ್ಟು ಪೋಷಣೆ ಮಾಡಬೇಕು ಎಂದು ತಿಳಿಸಿದರು.