ಚಾಲಾಕಿ ಹುಡುಗನೋರ್ವ ಗೋಬಿ ಮಂಚೂರಿಯನ್ ಆಸೆಗೆ ಕಿಡ್ನಾಪ್ ಕತೆ ಕಟ್ಟಿದ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಗೋಬಿ ಹಾಗೂ ಐಸ್ ಕ್ರೀಂ ತಿನ್ನುವ ಆಸೆಗೆ ಕಿಡ್ನ್ಯಾಪ್ ಕಥೆಗೆ ಪಾಲಕರು ಶಾಕ್ ಆಗಿ ಚಾಮರಾಜನಗರ ಪಟ್ಟಣ ಠಾಣೆಗೆ ದೂರು ಕೊಟ್ಟಿದ್ದರು. ಬಳಿಕ, ತನಿಖೆ ಕೈಗೊಂಡಾಗ ಅಸಲಿ ಕಥೆ ರಿವೀಲ್ ಆಗಿದೆ. ಕಿಡ್ನಾಪ್ ಕಥೆ ಕುರಿತು ಚಾಮರಾಜನಗರ ಎಸ್ಪಿ ಡಾ.ಬಿ.ಟಿ.ಕವಿತಾ ಮಾಧ್ಯಮದವರೊಂದಿಗೆ ಗುರುವಾರ ಬೆಳಗ್ಗೆ ಮಾತನಾಡಿ, ಬಾಲಕನ ತಂದೆ ದೂರು ನೀಡಿದ ತಕ್ಷಣವೇ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದಾಗ ಗೋಬಿ, ಐಸ್ ಕ್ರೀಂ ಆಸೆಗೆ ವಿದ್ಯಾರ್ಥಿಯದ್ದೆ ಇದು ಕಥೆ ಎಂಬುದು ಬೆಳಕಿಗೆ ಬಂದಿದೆ ಎಂದರು.