ದೊಡ್ಡಬಳ್ಳಾಪುರ: ನಗರದ ಅಂಚಿನಲ್ಲಿರುವ ಅರೆಹಳ್ಳಿಗುಡ್ಡದಹಳ್ಳಿ ಗ್ರಾಮದಲ್ಲಿ ನಕಲಿ ದಾಖಲೆ ಸೃಷಿಸಿ ಕಬಳಿಸಿದ್ದ ಆರು ಎಕರೆ ಗೋಮಾಳ ಜಮೀನನ್ನು ಸರ್ಕಾರ ವಶಪಡಿಸಿಕೊಂಡಿದೆ. ವಶಕ್ಕೆ ಪಡೆದಿರುವ ಭೂಮಿಯ ಈಗಿನ ಮಾರುಕಟ್ಟೆ ಮೌಲ್ಯ ಸುಮಾರು ₹40 ಕೋಟಿ ಎಂದು ಅಂದಾಜಿಸಲಾಗಿದೆ. ದೊಡ್ಡಬಳ್ಳಾಪುರ ನಗರದ ಪ್ರಭಾವಿಗಳಾದ ಕೆ.ಬಿ.ಮುದ್ದಪ್ಪ, ಪುರುಷೋತ್ತಮಗೌಡ, ಕೆ.ಬಿ.ಹನುಮಂತರಾಯಪ್ಪ, ಎಂ.ಮುನಿರಾಜು ಎಂಬುವರು ನಕಲಿ ದಾಖಲೆ ಸೃಷ್ಟಿಸಿ ಈ ಜಮೀನನ್ನು ತಮ್ಮ ಹೆಸರಿಗೆ ಖಾತೆ ಮಾಡಿಸಿಕೊಂಡಿದ್ದರು. ಅವರ ಹಪಣಿ ವಜಾಗೊಳಿಸುವ ಮೂಲಕ ಸರ್ಕಾರದ ಜಮೀನನ್ನು ವಶಕ್ಕೆ