ದಸರಾ ಹಬ್ಬವನ್ನು ಹಿಂದೂ ಸಂಪ್ರದಾಯದಂತೆ ಆಚರಣೆ ಮಾಡಲೇಬೇಕು ಎಂದು ಮಾಜಿ ಸಚಿವ ಎಂಪಿ ರೇಣುಕಾಚಾರ್ಯ ಅವರು ಒತ್ತಾಯಿಸಿದರು. ದಾವಣಗೆರೆ ನಗರದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಸಂಜೆ 5 ಗಂಟೆಗೆ ಮಾಧ್ಯಮದವರ ಜೊತೆ ಮಾತನಾಡಿದ ಅವರು, ನಾಡದೇವತೆಗೆ ಪೂಜೆ ಸಲ್ಲಿಸಿ ನಾವು ದಸರಾ ಹಬ್ಬವನ್ನು ಆಚರಣೆ ಮಾಡುತ್ತೇವೆ. ಆದ್ದರಿಂದ ಇದು ಪಕ್ಕ ಹಿಂದೂ ಸಂಪ್ರದಾಯ. ಇದರಲ್ಲಿ ಓಟ್ ಬ್ಯಾಂಕ್ ರಾಜಕಾರಣ ಮಾಡಬಾರದು. ನಾವು ಬಾನು ಮುಸ್ತಾಕ್ ಅವರ ಬಗ್ಗೆ ಅಭಿಮಾನ ಇದೆ. ಬೂಕರ್ ಪ್ರಶಸ್ತಿಗೆ ಅಪಮಾನ ಮಾಡುವುದಿಲ್ಲ ಎಂದರು.