ಪಟ್ಟಣದಲ್ಲಿರುವ ಆರಕ್ಷಕ ಠಾಣೆ ಈಜುಕೊಳವಾಗಿ ಮಾರ್ಪಟ್ಟಿದ್ದು ಸಾಕಷ್ಟು ಬಾರಿ ಪಿಎಸ್ಐ ಸುಜಾತ ಅವರು ಅಧಿಕಾರಿಗಳಿಗೆ ಹಾಗೂ ರಸ್ತೆ ಕಾಮಗಾರಿಯನ್ನು ಮಾಡಿದ ಗುತ್ತಿಗೆದಾರರಿಗೆ ಮನವಿ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ. ಸಣ್ಣಪುಟ್ಟ ಮಳೆಯಾದರೂ ಕೂಡ ತುರುವಿಹಾಳ ಪೊಲೀಸ್ ಠಾಣೆ ಆವರಣವೆಲ್ಲ ನೀರು ನಿಂತು ಗಬ್ಬೆದ್ದು ನಾರುತ್ತಿದೆ. ಠಾಣೆಯ ಮುಖ್ಯದ್ವಾರದ ಮುಂದೆ ನೀರು ನಿಂತ ಪರಿಣಾಮ ದೂರು ನೀಡಲು ಸಾರ್ವಜನಿಕರಿಗೆ ಸರಾಗವಾಗಿ ಬರದಂತಾಗಿತ್ತು. ಇದೀಗ ರವಿವಾರ ಆವರಣದಲ್ಲಿ ಸಂಗ್ರಹವಾದ ಮಳೆ ನೀರನ್ನು ಹೊರಗೆ ಹರಿಬಿಡಲಾಯಿತು. ಪೊಲೀಸ್ ಠಾಣೆಯೊಳಗೆ ನೀರು ಸಂಗ್ರಹವಾಗುವ ಸಮಸ್ಯೆಗೆ ಶಾಶ್ವತ ಪರಿಹಾರ ನೀಡಬೇಕು ಎಂದು ಸಾರ್ವಜ