ದಾವಣಗೆರೆ ನಗರದಲ್ಲಿ ಗೋಡೌನ್ ಒಂದಕ್ಕೆ ಬೆಂಕಿ ಹೊತ್ತಿಕೊಂಡು ಲಕ್ಷಾಂತರ ರೂ ನಷ್ಟ ಸಂಭವಿಸಿರುವ ಘಟನೆ ಮಂಗಳವಾರ ನಡೆದಿದೆ. ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಸುಮಾರಿಗೆ ನಗರದ ಎವಿಕೆ ರಸ್ತೆಯಲ್ಲಿರುವ ಸೋಪ್ ಆಯಿಲ್, ಪಿನಾಯಿಲ್, ಬ್ಲೀಚಿಂಗ್ ಪೌಂಡರ್, ಕ್ಲೀನಿಂಗ್ ಆಸೀಡ್ ಮತ್ತು ಲ್ಯಾಂಡ್ರಿ ಸಾಮಾಗ್ರಿಗಳನ್ನು ತುಂಬಿದ್ದ ಗೋಡೌನ್‌ಗೆ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡಿದ್ದು ಸುಮಾರು 2 ಲಕ್ಷ ರೂ ನಷ್ಟ ಸಂಭವಿಸಿದೆ ಎಂದು ಮಾಲೀಕ ಪ್ರಭಾಕರ್ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಬೆಂಕಿಯನ್ನು ನಂದಿಸಿದ್ದಾರೆ.