ಬರೋಬ್ಬರಿ 14 ವರ್ಷಗಳ ನಂತರ ಗದಗ-ಬೆಟಗೇರಿ ಅಂಜುಮನ್ ಏ ಇಸ್ಲಾಂ ಚುನಾವಣೆಗೆ ಮತದಾನ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಬೀಗಿ ಪೊಲೀಸ್ ಭದ್ರತೆಯನ್ನು ಅಳವಡಿಸಲಾಗಿದೆ. ಮತದಾನ ಕಾರ್ಯ ಭಾನುವಾರ ಬೆಳಿಗ್ಗೆ 8 ಗಂಟೆಯಿಂದಲೇ ನಡೆಯುತ್ತಿದೆ. ಒಟ್ಟು 41 ಅಭ್ಯರ್ಥಿಗಳು ಕಣದಲ್ಲಿ ಇದ್ದು, ಅಂತಿಮವಾಗಿ 11 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.