ಬಸವನಗಲ್ಲಿಯಲ್ಲಿ ಬೈಕ್ ಧ್ವಂಸ ಸಿಸಿ ಕ್ಯಾಮರಾದಲ್ಲಿ ಕಿಡಿಗೇಡಿಗಳು ಸೆರೆ. ಬೆಳಗಾವಿಯ ಬಸವಾಣ ಗಲ್ಲಿಯಲ್ಲಿ ಮದ್ಯೆ ರಾತ್ರಿ ಸುಮಾರಿಗೆ ದ್ವಿಚಕ್ರ ವಾಹನದ ಮೇಲೆ ಬಂದ ಇಬ್ಬರು ಯುವಕರು ಯಾವುದೇ ಕಾರಣವಿಲ್ಲದೇ ರಸ್ತೆಯಲ್ಲಿ ನಿಲ್ಲಿಸಿದ್ದ ಹಲವಾರು ವಾಹನಗಳ ಮೇಲೆ ರಾಡನಿಂದ ಹಾನಿ ಮಾಡಿದ್ದಾರೆ. ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಕೈಯಲ್ಲಿ ರಾಡ್ ಹಿಡಿದಿದ್ದ ಯುವಕರು ರಸ್ತೆಯುದ್ದಕ್ಕೂ ನಿಲ್ಲಿಸಿದ್ದ ದ್ವಿಚಕ್ರ ಮತ್ತು ಇತರ ವಾಹನಗಳ ಮೇಲೆ ದಾಳಿ ನಡೆಸಿದ್ದಾರೆ.ವಾಹನ ಮಾಲೀಕರಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಸಿಸಿಟಿವಿ ದೃಶ್ಯಾವಳಿ ಆಧಾರದ ಮೇಲೆ ಸೋಮವಾರ ಪೊಲೀಸರು ಆರೋಪಿಗಳ ಪತ್ತೆಗೆ ಶೋಧ ಆರಂಭ