ಧರ್ಮಸ್ಥಳ ಪ್ರಕರಣ ಎನ್ಐಎಗೆ ಕೊಡುವ ಒತ್ತಾಯ ವಿಚಾರಕ್ಕೆ ಸಂಬಂಧಿಸಿ ಶುಕ್ರವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಡಾಲರ್ಸ್ ಕಾಲೋನಿಯಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಮಾಜಿ ಸಿಎಂ ಡಿವಿ ಸದಾನಂದ ಗೌಡ ಅವರು, ಧರ್ಮಸ್ಥಳ ಪ್ರಕರಣಗಳ ತನಿಖೆ ಆರಂಭದಿಂದಲೂ ಗೊಂದಲದಲ್ಲೇ ನಡೀತಿದೆ. ಆರಂಭದಲ್ಲೇ ಎನ್ಐಎ ತನಿಖೆಗೆ ಈ ಪ್ರಕರಣಗಳನ್ನು ವಹಿಸಬೇಕಿತ್ತು. ಎಸ್ಐಟಿ ತನಿಖೆ ತಾರ್ಕಿಕ ಅಂತ್ಯ ಮುಟ್ಟೋದಿಲ್ಲ ಅನ್ನೋ ಬಗ್ಗೆ ಚರ್ಚೆ ನಡೀತಿದೆ. ಧರ್ಮಸ್ಥಳ ವಿರುದ್ಧ ಸುದೀರ್ಘ ಅವಧಿಯಿಂದ ಷಢ್ಯಂತ್ರ ನಡೆದಿದೆ. ಹೊಸ ಹೊಸ ಪಾತ್ರಧಾರಿಗಳು ಬಂದಿದ್ದಾರೆ. ಸಮಗ್ರವಾಗಿ ತನಿಖೆ ನಡೆಸಬೇಕಾಗುತ್ತದೆ. ಧಾರ್ಮಿಕ ಕ್ಷೇತ್ರದ ಮೇಲೆ ಹಂತ ಹಂತದ ಪಿತೂರಿ ನಡೆದಿದೆ ಎಂದರು.