ಹನೂರು ತಾಲೂಕಿನ ವಡಕೆಹಳ್ಳ ಸಮೀಪದ ಕರಿಕಲ್ಲು ಗುಡ್ಡೆಬಯಲು ಅರಣ್ಯ ಪ್ರದೇಶದಲ್ಲಿ ಉಡ ಬೇಟೆ ನಡೆಸಿದ ಆರೋಪದ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ಓರ್ವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಡಕೆಹಳ್ಳದ ನಿವಾಸಿಗಳಾದ ಚಿನ್ನ ಮುತ್ತು ಎಂಬಾತನೆ ಬಂಧಿತನಾಗಿದ್ದಾನೆ ಈ ಕಾರ್ಯಾಚರಣೆ ರಾಮಾಪುರ ವನ್ಯಜೀವಿ ವಲಯ ಮತ್ತು ಕೌದಳ್ಳಿ ವಲಯ ಅರಣ್ಯಾಧಿಕಾರಿ ಉಮಾಪತಿ ಕೆ ಅವರ ಮಾರ್ಗದರ್ಶನದಲ್ಲಿ ಅಧಿಕಾರಿಗಳು ಖಚಿತ ಮಾಹಿತಿಯ ಆಧಾರಿಸಿ ಧಾಳಿ ನೆಡೆಸಾಗ ಈ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣ ಸ್ಥಳಕ್ಕೆ ಧಾವಿಸಿದ ಅರಣ್ಯ ಸಿಬ್ಬಂದಿ ಚಿನ್ನ ಮುತ್ತ ರವರನ್ನು ಬಂಧಿಸಿದ್ದಾರೆ ಈ ವೇಳೆ ಕೊಳಂದ್ರೆ ಪರಾರಿಯಾಗಿದ್ದು, ಅವರಿಗಾಗಿ ಹುಡುಕಾಟ ಮುಂದುವರಿದೆ.