ಶಿವಮೊಗ್ಗದಲ್ಲಿ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಭದ್ರಾವತಿಯಲ್ಲಿ ಪಾಕಿಸ್ತಾನ ಜಿಂದಾಬಾದ್ ಘೋಷಣೆ ಹಾಗೂ ಮತ್ತೆ ಹುಟ್ಟುವುದಾದರೆ ಸಾವಿರಾರು ಹುಟ್ಟಬೇಕೆಂದು ಶಾಸಕಾ ಸಂಗಮೇಶ್ ಹೇಳಿಕೆ ವಿಚಾರ ಕುರಿತಂತೆ ಮಂಗಳವಾರ ಪ್ರತಿಕ್ರಿಯೆ ನೀಡಿದ್ದಾರೆ. ರಾಜ್ಯವನ್ನ ರಾಜ್ಯದ ಕಾಂಗ್ರೆಸ್ ಸರ್ಕಾರ ಮುಸಲ್ಮಾನ್ ರಾಜ್ಯ ಮಾಡಲು ಹೊರಟಿದೆ.ಗಣಪತಿ ಮೆರವಣಿಗೆಯಲ್ಲಿ ಮಸೀದಿ ಮೂಲಕ ಕಲ್ಲು ತೂರುತ್ತಾರೆ. ಗಣಪತಿ ಮೆರವಣಿಗೆಯಲ್ಲಿ ಉಗಿಯುತ್ತಾರೆ. ಈಗ ಭದ್ರಾವತಿಯಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗುವ ತನಕ ಹೋಗಿದ್ದಾರೆ. ಹಿಂದುಸ್ತಾನ್ ಅನ್ನ ಬೇಕು. ಆದರೆ ಇವರಿಗೆ ಪಾಕಿಸ್ತಾನ ಜಿಂದಾಬಾದ್ ಬೇಕು. ಸಂಗಮೇಶ್ ಪಾಕಿಸ್ತಾನ ಜಿಂದಾಬಾದ್ ಎಂದು ಕೂಗಿದ್ದು ಸುಳ್ಳು ಎಂದು ಹೇಳುತ್ತಾರೆ. ತನಿಖೆ ಆಗುವ ಮೊದಲೇ ಈ ರೀತಿ ಹೇಳಿಕೆ ತಪ್ಪು ಎಂದರು.