ಅಧಿಕ ಮಳೆಯಿಂದಾಗಿ ಹೆಸರಿನ ಹೊಲದಲ್ಲಿ ನೀರು ನಿಂತು ಬೆಳೆ ಸಂಪೂರ್ಣ ಹಾಳದ ವಿಷಯ ತಿಳಿದ ಕ್ಷೇತ್ರದ ಶಾಸಕ ಡಾ. ಸಿದ್ದು ಪಾಟೀಲ ಅವರು ಭಾನುವಾರ ಮಧ್ಯಾಹ್ನ 2:30ಕ್ಕೆ ವರವಟ್ಟಿ(ಕೆ) ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಬೆಳೆ ಸಂಪೂರ್ಣ ಹಾಳಾದ ಕಾರಣ ಅದಕ್ಕೆ ಸೂಕ್ತ ಪರಿಹಾರ ಒದಗಿಸುವಂತೆ ಸಂತ್ರಸ್ತ ರೈತರು ಶಾಸಕ ಡಾ.ಸಿದ್ದು ಪಾಟೀಲರಿಗೆ ಮನವಿ ಮಾಡಿದರು. ಸ್ಥಳದಲ್ಲಿದ್ದ ತಹಶೀಲ್ದಾರ್ ಅಂಜುಮ್ ತಬಸುಮ್, ಎ. ಡಿ.ಶರಣಕುಮಾರ ಇದ್ದರು.