ಚನ್ನಪ್ಪನಹಳ್ಳಿ ರಸ್ತೆಯಲ್ಲಿರುವ ತೆಂಗಿನಬಾವಿ ಕಲ್ಯಾಣಿ ಯಲ್ಲಿ ಗಂಗೆ ಬಳಿ ಸಂಪ್ರದಾಯದಂತೆ ಶನಿವಾರ ಕಾವಡಿಗಳಿಗೆ ಅರ್ಚಕರಿಂದ ಅಭಿಷೇಕ ಮಾಡಿ ಗಂಗೆಯಲ್ಲಿ ಕಾವಡಿಗಳನ್ನು ತೊಳೆಯಲಾಯಿತು.ನಂತರ ಚನ್ನಪ್ಪನಹಳ್ಳಿ ರಸ್ತೆಯ ಬಳಿ ಹೋಮ ಪೂಜೆ ನೆರವೇರಿಸಲಾಯಿತು ಗಂಗೆ ಬಳಿ ಅಭಿಷೇಕ ಮಾಡಿದ್ದ ಕಾವಡಿಗಳಿಗೆ ವಿಶೇಷವಾಗಿ ಸಿಂಗಾರಮಾಡಲಾಗಿತ್ತು ಅದಾದ ಬಳಿಕ ಸುಬ್ರಹ್ಮಣ್ಯ ಸ್ವಾಮಿಯ ಕಾವಡಿ ಭಜನೆ ಪ್ರಾರಂಭ ಮಾಡಿ ಮೆರವಣಿಗೆ ದೇವರುಗಳನ್ನು ವಿವಿಧ ಹೂಗಳಿಂದ ಸಿಂಗರಿ ಹೆಗಲ ಮೇಲೆ ಹೊತ್ತು ಕಾವಡಿಗಳ ಜೊತೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.ಈ ಸಂದರ್ಭದಲ್ಲಿ ಗೌಡರ ಚಿಕ್ಕಮನಿಯಪ್ಪ,ಯಜಮಾನ್ ಅಶ್ವತಪ್ಪ, ಶಿವಕುಮಾರ್, ನಾರಾಯಣಸ್ವಾಮಿ, ಪ್ರಕಾಶ್, ನಾಗರಾಜ್,ರಮೇಶ್,ಪೆರುಮಾಳಪ್ಪ,ಪಾಪಣ್ಣ, ಮುನಿಯಪ್ಪ,ನಾಗೇಶ್ ಇದ್ದರು