ಹಳಿಯಾಳ : ಪಟ್ಟಣದ ಚಂದಾವನ ರೆಸಾರ್ಟ್‌ನಲ್ಲಿ ನವರಾತ್ರಿ ಆಚರಣೆಯ ಅಂಗವಾಗಿ ಕೃಶ್ ಫ್ಲೈ ನವರು ಆಯೋಜಿಸಿದ ದಾಂಡಿಯಾ ನೃತ್ಯ ಕಾರ್ಯಕ್ರಮವನ್ನು ಬುಧವಾರ ಸಂಜೆ 7.30 ಗಂಟೆ ಸುಮಾರಿಗೆ ಶಾಸಕ ಆರ್.ವಿ.ದೇಶಪಾಂಡೆಯವರು ಉದ್ಘಾಟಿಸಿದರು. ನವರಾತ್ರಿಯ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಮಹತ್ವವನ್ನು ಸ್ಮರಿಸಿಕೊಂಡು, ಸಂಪ್ರದಾಯ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕಾರ್ಯಕ್ರಮಗಳು ಸಮಾಜದಲ್ಲಿ ಏಕತೆ, ಸಹಬಾಳ್ವೆ ಮತ್ತು ಸಂತೋಷವನ್ನು ಹರಡುತ್ತಿವೆ ಎಂದು ಆರ್.ವಿ.ದೇಶಪಾಂಡೆಯವರು ನುಡಿದರು.