ಮರದ ದಿಮ್ಮಿಗಳನ್ನು ಸಾಗಿಸುತ್ತಿದ್ದ ಲಾರಿಯೊಂದು ಶಾಂತಿಗ್ರಾಮದ ಬಳಿ ರಸ್ತೆಯ ತಿರುವಿನಲ್ಲಿ ಸಿಲುಕಿಕೊಂಡ ಪರಿಣಾಮ ಕೆಲ ಕಾಲ ಶೃಂಗೇರಿ ಹೊರನಾಡು ಸಂಪರ್ಕಿಸುವ ಮುಖ್ಯ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಲಾರಿ ತಿರುವಿನಲ್ಲಿ ಸಿಲುಕಿದ್ದರಿಂದ ಇತರ ವಾಹನ ಸವಾರರಿಗೆ ಕೆಲ ಕಾಲ ಸಮಸ್ಯೆಯಾಗಿತ್ತು, ನಂತರ ಲಾರಿಯನ್ನು ಟ್ರ್ಯಾಕ್ಟರ್ ಮೂಲಕ ಎಳೆದು ವಾಹನ ಸಂಚಾರಕ್ಕೆ ಅಣುವು ಮಾಡಿಕೊಡಲಾಯಿತು.