ಮನುಷ್ಯ ಶ್ರಮ ಪಡಬೇಕು. ಶ್ರಮಪಟ್ಟರೆ ಮಾತ್ರ ಪ್ರತಿಫಲ ಸಿಗುತ್ತದೆ. ನಾನು ಶ್ರಮ ಪಟ್ಟಿದ್ದಕ್ಕೆ ನಾನು ಎಂಎಲ್‌ಎ ಆದೆ. ನಾನು ಶ್ರಮ ಪಡದೆ ಮನೆಯೊಳಗೆ ಕುಳಿತ್ತಿದ್ದರೆ ಎಂಎಲ್‌ಎ ಆಗುತ್ತಿರಲಿಲ್ಲ. ಈ ನೀವು ಕಠಿಣ ಶ್ರಮ ಪಟ್ಟರೆ ಮಾತ್ರ ಯಶಸ್ವಿ ಕ್ರೀಡಾಪಟುಗಳಾಗಿ ಹೊರಹೊಮ್ಮಲು ಸಾಧ್ಯ ಎಂದು ಮಾಯಕೊಂಡ ಶಾಸಕ ಕೆ.ಎಸ್.ಬಸವಂತಪ್ಪ ಕ್ರೀಡಾಪಟುಗಳಿಗೆ ಕಿವಿಮಾತು ಹೇಳಿದರು. ದಾವಣಗೆರೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬುಧವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಶಾಲಾ ಶಿಕ್ಷಣ ಇಲಾಖೆ ಉತ್ತರ ವಲಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ತಾಲೂಕು ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಮನುಷ್ಯ ಯಾವೊತ್ತು ಕಷ್ಟ ಪಡಬೇಕು. ಸುಖದಿಂದ ಇರಬಾರದು ಎಂದರು.