ವಿಧ್ಯಾರ್ಥಿನಿ ಕೊಲೆ ಆರೋಪಿಯನ್ನ ಬಂದಿಸಿದ್ದಾಗಿ ಎಸ್ಪಿ ರಂಜಿತ್ ಕುಮಾರ್ ಬಂಡಾರು ತಿಳಿಸಿದ್ದಾರೆ. ಗುರುವಾರ ಸಂಜೆ 5 ಗಂಟೆಗೆ ಪತ್ರಿಕಾಗೋಷ್ಠಿ ನಡೆಸಿದ ಎಸ್ಪಿ ರಂಜಿತ್ ಕುಮಾರ್ ಬಂಡಾರು ಅವರು ಮಾತನಾಡಿದ್ದು ಇದೇ 19 ರಂದು ಚಿತ್ರದುರ್ಗದ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಗೋನೂರು ಬಳಿ ಅರೆಬರೆ ಸುಟ್ಟ ಸ್ಥಿತಿಯಲ್ಲಿ ಯುವತಿಯ ಶವ ದೊರೆತಿದ್ದು ಸ್ಥಳೀಯ ಹೋಟೆಲ್ ನವರ ಮಾಹಿತಿ ಮೇರೆಗೆ ಪ್ರಖರಣ ಧಾಖಲಿಸಿದ್ದೆವು. ಪರಿಶೀಲನೆ ನಂತರ ಕೋವೇರಹಟ್ಟಿ ಗ್ರಾಮದ ಯುವತಿ ಎಂದು ತಿಳಿದು ಬಂದಿದ್ದು ಅರೋಪಿಯ ಪತ್ತೆಗೆ ನಾಲ್ಕು ತಂಡಗಳ ರಚನೆ ಮಾಡಿ ಇಂದು ಬೆಳಗ್ಗೆ ಕೊಲೆ ಆರೋಪಿ ಚೇತನ್ ಬಂದನ ಮಾಡಲಾಗಿದೆ ಎಂದು ತಿಳಿಸಿದ್ದಾರೆ