ಕಲಬುರಗಿ : ಒಳಮೀಸಲಾತಿಯು ದೋಷಪೂರಿತವಾಗಿದೆ.. ಮುಂಬರುವ ಸಚಿವ ಸಂಪುಟದಲ್ಲಿ ಒಳಮೀಸಲಾತಿಯಲ್ಲಿನ ವರ್ಗೀಕರಣ ಸೂತ್ರವನ್ನ ದೋಷಮುಕ್ತಗೊಳಿಸಬೇಕೆಂದು ಕರ್ನಾಟಕ ಮಾದಿಗ ಮತ್ತು ಉಪಜಾತಿಗಳ ಒಳಮೀಸಲಾತಿ ಒಕ್ಕೂಟದ ಅಧ್ಯಕ್ಷ ಗುಂಡಪ್ಪ ಶಿರಡೋಣ ಆಗ್ರಹಿಸಿದ್ದಾರೆ.. ಸೆಪ್ಟೆಂಬರ್ 3 ರಂದು ಮಧ್ಯಾನ 12 ಗಂಟೆಗೆ ನಗರದಲ್ಲಿ ಮಾತನಾಡಿದ ಅವರು, ಒಳಮೀಸಲಾತಿ ಕುರಿತು ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ನ ಮೂಲ ಆಶಯವನ್ನೆ ಮಣ್ಣುಪಾಲು ಮಾಡಿದ್ದು, ಅನ್ಯಾಯದದಿಂದ ತತ್ತರಿಸಿರೋ 59 ಸಣ್ಣ ಜಾತಿಗಳಲ್ಲಿ ಮಾದಿಗ ಸಮಾಜದ 14 ಉಪಜಾತಿಗಳು ಸಹ ಸೇರಿವೆ ಅಂತಾ ಗುಂಡಪ್ಪ ಶಿರಡೋಣ ಕಿಡಿಕಾರಿದ್ದಾರೆ.