ವಿಜಯಪುರ ಜಿಲ್ಲೆಯ ಸಿಂದಗಿ ಪಟ್ಟಣದಲ್ಲಿ ಗ್ರಹ ಕಚೇರಿಯಲ್ಲಿ ಭಾನುವಾರ ಮದ್ಯಾನ 3ಗಂಟೆ ಸುಮಾರಿಗೆ ಶಾಸಕ ಅಶೋಕ್ ಮನಗೂಳಿ ಸಾರ್ವಜನಿಕರ ಕುಂದು ಕೊರತೆ ಆಲಿಸಿದರು ಸಿಂದಗಿ ಮತಕ್ಷೇತ್ರದ ನಾನಾ ಬಾಗಗಳಿಂದ ಆಗಮಿಸಿದ ಸಾರ್ವಜನಿಕರು ಶಾಸಕರ ಮುಂದೆ ತಮ್ಮ ಸಮಸ್ಯೆ ಹೇಳಿಕೊಂಡರು. ಇದೆ ವೇಳೆ ಇತ್ತೀಚೆಗೆಷ್ಟೇ ಸುರಿದ ಮಳೆಯ ಅವಾಂತರಕ್ಕೆ ಮನೆಗಳಿಗೆ ನೀರು ನುಗ್ಗಿ ಹಾನಿಯಾಗಿದೆ ಕೂಡಲೇ ಪರಿಹಾರ ವದಗಿಸಬೇಕು ಎಂದು ಮನವಿ ಮಾಡಿದರು. ಕೂಡಲೇ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿ ಪರಿಹಾರ ನೀಡುವ ಭರವಸೆ ಶಾಸಕರು ನೀಡಿದರು. ಈ ಸಂದರ್ಭದಲ್ಲಿ ಸಾರ್ವಜನಿಕರು ಪಕ್ಷದ ಮುಖಂಡರು ಕುಂದುಕೊರತೆ ಸಭೆಯಲ್ಲಿ ಬಾಗಿಯಾಗಿದರು.